ಕನ್ನಡ English हिन्दी
Hanagal Kumaraswamy & Pt. Panchakshara Gawai
Hanagal Kumaraswamy & Pt. Panchakshara Gawai Pt. Puttaraj Gawai
|| Sri Guru Kumara Vande ||

Sukshetra Sri Veereshwar Punyashram

Revered Ganayogi, Kaviyogi

Pandit Panchakshara Gawai

Padma Bhushan Dr. Pandit Puttaraj Kavi Gawai

Pt. Puttaraj Gawai

Shree Veereshwara Punyashrama Drama Company

ಸಾಂಸ್ಕೃತಿಕ ಪರಂಪರೆ

ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘ

ಗುರು ಪುಟ್ಟರಾಜರು 1940ರಲ್ಲಿ ಸ್ಥಾಪಿಸಿದ 'ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘ' ನಾಡಿನಲ್ಲಷ್ಟೇ ಅಲ್ಲದೇ ದೇಶಾದ್ಯಂತ ಒಂದು ಧರ್ಮ ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಶರಣ-ಶರಣೆಯರ ಆಧ್ಯಾತ್ಮ ಜೀವನದ ಚಿಂತನೆಗಳನ್ನು ಕಲಾತ್ಮಕವಾಗಿ ನಾಟಕಗಳಲ್ಲಿ ಮೂಡಿಸುತ್ತಾ ನೀತಿಪಾಠಗಳ ಬೋಧನೆ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಪ್ರೇಕ್ಷಕರನ್ನು ಆದರ್ಶದ ಬೆಳಕಿನಡೆಗೆ ಕರೆದೊಯ್ಯುತ್ತ ಸಾಗಿದೆ.

ಸ್ಥಾಪನೆ ಮತ್ತು ಉದ್ದೇಶ

ಈ ಸಂಸ್ಥೆ ಹಾನಗಲ್ಲ ಗುರುಕುಮಾರೇಶ್ವರರ ಕೃಪಾದೃಷ್ಟಿಯ ಫಲವಾಗಿ ಲಿಂ.ಪಂ. ಪಂಚಾಕ್ಷರ ಗವಾಯಿಗಳು, ಪಂ. ಪುಟ್ಟರಾಜ ಗುರುವರ್ಯರ ಅಂಧ-ಅನಾಥ ಬಡ ಮಕ್ಕಳ ಸಂಗೀತ ಶಾಲೆಗಾಗಿ ಅವರ ಪ್ರಸಾದ ನಿಲಯಕ್ಕೆ ಎದುರಾದ ಆರ್ಥಿಕ ಸಂಕಷ್ಟ ನೀಗಿಸಲೆಂದು ಸ್ಥಾಪಿತವಾದ ಗುರುಕೃಪೆಯ ನಾಟಕ ಕಂಪನಿ.

ಸಮಾಜ ಸೇವೆ

ಯಾವುದೇ ವ್ಯಾವಹಾರಿಕ ಉದ್ದೇಶ ಹೊಂದಿರದೇ ನಾಡಿನ ಬಡ, ದೀನ-ದಲಿತ, ಅಂಧ-ಅನಾಥ ಮಕ್ಕಳಿಗೆ ಉಚಿತ ಅನ್ನದಾಸೋಹ ಹಾಗೂ ವಸತಿ ನೀಡಿ ಅವರ ಬಾಳಿಗೆ ಬೆಳಕು ನೀಡುವ ನಟ್ಟಿನಲ್ಲಿ ಶ್ರಮವಹಿಸುತ್ತಿದೆ.

ವಿಶಿಷ್ಟ ವೈಶಿಷ್ಟ್ಯ

ಸಮಾಜದ ಗಣ್ಯಮಾನ್ಯರು ಕಲಾವಿದರ ಹೆಸರಾಂತ ಚಲನಚಿತ್ರ ನಟರು, ಭಕ್ತ ಗೌರವಾಧರತೆಗೆ ಕಾರಣವಾಗಿದೆ. ಪೂಜ್ಯರ ಅಪ್ಪಣೆಯಂತೆ ಸ್ತ್ರೀ ಪಾತ್ರಗಳನ್ನು ಪುರುಷರೇ ಮಾಡುವ ಕಟ್ಟುನಿಟ್ಟಿನ ನಿಯಮವನ್ನು ಇಲ್ಲಿಯವರೆಗೂ ಈ ಸಂಸ್ಥೆಯ ಕಲಾವಿದರು ಪಾಲಿಸಿಕೊಂಡು ಬಂದಿದ್ದಾರೆ. ಅದಕ್ಕಾಗಿಯೇ ಉಳಿದ ನಾಟಕ ಕಂಪನೆಗಳಿಗಿಂತ ವಿಶಿಷ್ಟ ವಿಶೇಷ.

ಪ್ರಮುಖ ನಾಟಕಗಳು

ಭಕ್ತಿ & ಪೌರಾಣಿಕ ನಾಟಕಗಳು

  • ಶಿವಶರಣೆ ಅಕ್ಕಮಹಾದೇವಿ
  • ಭಗವಾನ್ ಬಸವೇಶ್ವರ
  • ಅಸ್ಪಶ್ಯೋದ್ಧಾರಕ ಚನ್ನಯ್ಯ
  • ಶ್ರೀಕೃಷ್ಣ ಗಾರುಡಿಗ
  • ಶಿರಹಟ್ಟಿ ಫಕೀರೇಶ್ವರ
  • ಶಿವಯೋಗಿ ಸಿದ್ಧರಾಮೇಶ್ವರ
  • ಸತಿ ಸುಕನ್ಯ
  • ನೆಲೂರ ನೆಂಬಕ್ಕ
  • ಹೇಮರಡ್ಡಿ ಮಲ್ಲಮ್ಮ

ಸಾಮಾಜಿಕ ನಾಟಕಗಳು

  • ಕೊರವಂಜಿ
  • ಕಿವುಡ ಮಾಡಿದ ಕಿತಾಪತಿ
  • ಬಸ್ ಕಂಡಕ್ಟರ್
  • ಚನ್ನಪ್ಪ ಚನ್ನಗೌಡ
  • ಮಲಮಗಳು
ಐತಿಹಾಸಿಕ ಸಾಧನೆ

ಹೇಮರಡ್ಡಿ ಮಲ್ಲಮ್ಮ — ರಂಗಭೂಮಿ ದಾಖಲೆ

375
ಪ್ರದರ್ಶನಗಳು
33
ಎಕರೆ ಭೂಮಿ

ನಲವಡಿ ಶ್ರೀಕಂಠ ಶಾಸ್ತ್ರಿಗಳು ರಚಿಸಿದ ಹೇಮರಡ್ಡಿ ಮಲ್ಲಮ್ಮ ನಾಟಕವು ಗದುಗಿನಲ್ಲಿ 375 ಪ್ರದರ್ಶನಗೊಂಡು ರಂಗಭೂಮಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ದಾಖಲೆ ನಿರ್ಮಿತವಾಗಿದೆ. ಈ ನಾಟಕ ಪ್ರದರ್ಶನದಂದು ವೀರೇಶ್ವರ ಪುಣ್ಯಾಶ್ರಮಕ್ಕೆ 33 ಎಕರೆ ಭೂಮಿಯನ್ನು ಖರೀದಿಸಲಾಯಿತು. ಆ ಹೊಲಕ್ಕೆ ಮಲ್ಲಮ್ಮನ ಹೊಲವೆಂದು ಹೆಸರು ಬಂದಿತು. ಆ ಥೇಟರ್ ಮಲ್ಲಮ್ಮನ ಥೇಟರ್ಎಂದೇ ಹೆಸರಾಯಿತು.

Scroll to Top